![](http://kannada.newsx.com/wp-content/uploads/2024/07/hhggffssss-300x300.jpg)
ಬೆಂಗಳೂರು; ಬೆಂಗಳೂರಿನಲ್ಲಿ ಆಗಾಗ ಅಗ್ನಿ ಪ್ರಮಾದಗಳು ನಡೆಯುತ್ತಲೇ ಇರುತ್ತವೆ. ಮೊನ್ನೆ ಕೂಡಾ ಎಂಜಿ ರಸ್ತೆಯಲ್ಲಿ ಬಿಎಂಟಿಸಿ ಬಸ್ ಹೊತ್ತಿ ಉರಿದಿತ್ತು.. ದೊಡ್ಡ ದೊಡ್ಡ ಕಟ್ಟಡಗಳಿಗೂ ಆಗಾಗ ಬೆಂಕಿ ಬೀಳುತ್ತಿರುತ್ತದೆ. ಇಂತಹ ಸಮಯದಲ್ಲಿ ಶೀಘ್ರವಾಗಿ ಬೆಂಕಿ ನಂದಿಸಲು ನಮ್ಮ ಅಗ್ನಿಶಾಮಕದಳದ ಬಳಿ ಅತ್ಯಾಧುನಿಕ ಯಂತ್ರಗಳು ಇರಲಿಲ್ಲ.. ಜೊತೆಗೆ ಕಿರಿದಾದ ರಸ್ತೆ, ಬೇಸ್‌ಮೆಂಟ್, ಬಹುಮಹಡಿ ಕಟ್ಟಡಗಳಿಗೆ ಬೆಂಕಿ ಬಿದ್ದಾಗ ನಂದಿಸೋದು ತುಂಬಾನೇ ಕಷ್ಟಕರವಾಗಿತ್ತು.. ಹೀಗಾಗಿ, ಬೆಂಗಳೂರಿನ ಅಗ್ನಿಶಾಮಕ ದಳ, ಹೊಸ ತಂತ್ರಜ್ಞಾನದ ಮೊರೆ ಹೋಗಿದೆ.. ರೋಬೋಟ್‌ಗಳನ್ನು ತರಿಸಿ, ಅವುಗಳ ಮೂಲಕ ಬೆಂಕಿ ನಂದಿಸುವ ಕೆಲಸಕ್ಕೆ ಕೈಹಾಕಿದೆ..
ಇದನ್ನೂ ಓದಿ; 30 ಲಕ್ಷ ರೂ. ಆಸೆಗೆ ಕಿಡ್ನಿ ದಾನ ಮಾಡಿದ ಆಟೋ ಚಾಲಕ!; ಪಂಗನಾಮ ಹಾಕಿದ ವಂಚಕರು!
ಮುಂಬೈ, ದೆಹಲಿ ಸೇರಿದಂತೆ ದೇಶದ ಹಲವು ಕಡೆ ಅಗ್ನಿಶಾಮಕದಳದವರು ಈಗಾಗಲೇ ರೋಬೋಟ್‌ಗಳನ್ನು ಬಳಸುತ್ತಿದ್ದಾರೆ.. ಹೀಗಾಗಿ ಬೆಂಗಳೂರಿಗೂ ರೋಬೋಟ್‌ಗಳನ್ನು ತರಿಸೋದಕ್ಕೆ ಮುಂದಾಗಿದ್ದಾರೆ.. ಸುಮಾರು ಒಂದು ಕೋಟಿ ರೂಪಾಯಿ ಖರ್ಚು ಮಾಡಿ ಹತ್ತು ರೋಬೋಟ್‌ಗಳನ್ನು ಖರೀದಿ ಮಾಡಲು ಅಗ್ನಿಶಾಮಕ ಇಲಾಖೆ ಮುಂದಾಗಿದೆ.. ಈ ರೋಬೋಟ್‌ಗಳಲ್ಲಿ ಅಗ್ನಿ ನಿರೋಧಕ ಹೊದಿಕೆ ಇದೆ ಎಂದು ತಿಳಿದುಬಂದಿದೆ.. ಜೊತೆಗೆ ವಾಟರ್ ಜೆಟ್, ಚೈನ್ ವ್ಯವಸ್ಥೆ, ಕ್ಯಾಮರಾ ಸೇರಿದಂತೆ ಹಲವಾರು ಸೌಲಭ್ಯಗಳಿವೆ ಎಂದು ಹೇಳಲಾಗಿದೆ..
ಇದನ್ನೂ ಓದಿ; ಕಾಲೇಜು ವಿದ್ಯಾರ್ಥಿನಿ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ..!
The post ಬೆಂಗಳೂರಿಗೆ ಬರಲಿವೆ ಬೆಂಕಿ ನಂದಿಸುವ ರೋಬೋಟ್‌ಗಳು..! appeared first on Latest News in Kannada | Kannada News Channel | ಕನ್ನಡ ಸುದ್ದಿ | NewsX Kannada |.