![](http://kannada.newsx.com/wp-content/uploads/2024/09/traisss-300x300.jpg)
ನವದೆಹಲಿ; ಬರೋಬ್ಬರಿ ಒಂದು ಕೋಟಿ ಮೊಬೈಲ್ ನಂಬರ್‌ಗಳು ಬ್ಲಾಕ್.. ಟ್ರಾಯ್ ಇಂತಹದ್ದೊಂದು ಮಹತ್ವದ ಕ್ರಮ ತೆಗೆದುಕೊಂಡಿದೆ.. ದೇಶಾದ್ಯಂತ ಒಂದು ಕೋಟಿ ಮೊಬೈಲ್ ನಂಬರ್‌ಗಳು ಈಗಾಗಲೇ ಬ್ಲಾಕ್ ಆಗಿವೆ.. ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ ಇಂತಹ ಕಠಿಣ ನಿರ್ಧಾರ ತೆಗೆದುಕೊಂಡಿದ್ದು, ಇದು ಮಹತ್ವದ ನಿರ್ಧಾರ ಎನಿಸಿದೆ..
ದೇಶದಲ್ಲಿ ಸ್ಪ್ಯಾಮ್ ಕರೆಗಳು ಹೆಚ್ಚಾಗಿವೆ.. ಜನರಿಗೆ ಕರೆ ಮಾಡಿ ಪ್ರಾಣ ತಿನ್ನುವವರು, ಮೋಸ ಮಾಡುವವರು ಹೆಚ್ಚಾಗಿದ್ದಾರೆ.. ಹೀಗಾಗಿ ಸ್ಪ್ಯಾಮ್ ಕರೆಗಳಿಗಾಗಿ ಬಳಸುತ್ತಿದ್ದ ಫೋನ್ ನಂಬರ್‌ಗಳನ್ನು ಬ್ಲಾಕ್ ಮಾಡಲಾಗಿದೆ.. ದೂರಸಂಪರ್ಕ ಇಲಾಖೆ (DoT), ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (TRAI) ಬಳಕೆದಾರರಿಗೆ ಟೆಲಿಕಾಂ ಸೇವೆಗಳನ್ನು ಇನ್ನಷ್ಟು ಉತ್ತಮಗೊಳಿಸಲು ಹಲವಾರು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಈ ಕ್ರಮದಲ್ಲಿ ಒಂದು ಕೋಟಿಗೂ ಹೆಚ್ಚು ನಕಲಿ ಮೊಬೈಲ್ ಸಂಪರ್ಕಗಳನ್ನು ಕಡಿತಗೊಳಿಸಲಾಗಿದೆ.
ಕಂಪನಿ ಸೇವೆಗಳ ಹೆಸರಲ್ಲಿ ಕರೆಗಳನ್ನು ಮಾಡುವುದು, ಮೋಸ ಮಾಡುವುದಕ್ಕಾಗಿ ಸಿಕ್ಕಿ ಸಿಕ್ಕ ನಂಬರ್‌ಗಳಿಗೆ ಕರೆ ಮಾಡುವುದು ಮಾಡುತ್ತಿದ್ದವರ ನಂಬರ್‌ಗಳನ್ನು ಸ್ಥಗಿತಗೊಳಿಸಲಾಗಿದೆ.. ಇದರಿಂದಾಗಿ, ಕಸ್ಟಮರ್ ಕೇರ್ ಹಾಗೂ ಮಾರುಕಟ್ಟೆ ಏಜೆಂಟರ ಹೆಸರಲ್ಲಿ ಬರುತ್ತಿದ್ದ ಕರೆಗಳು ಸಾಕಷ್ಟು ನಿಂತಿವೆ..
The post ಬರೋಬ್ಬರಿ 1 ಕೋಟಿ ಫೋನ್ ನಂಬರ್‌ಗಳು ಬ್ಲಾಕ್!; ನಿಮ್ಮದೂ ಇದೆಯಾ..? appeared first on Latest News in Kannada | Kannada News Channel | ಕನ್ನಡ ಸುದ್ದಿ | NewsX Kannada |.